best free html templates


ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನ, ಬೊಮ್ಮನಕಟ್ಟೆ,ಶಿವಮೊಗ್ಗ.

Mobirise

ಅಮ್ಮನವರ ಭಕ್ತಿ ಸಿಂಚನ

ಕರ್ನಾಟಕದ ಮಲೆನಾಡಿನ ಶಿವಮೊಗ್ಗ ನಗರದ ಬೊಮ್ಮನಕಟ್ಟೆಯಲ್ಲಿ ಭಕ್ತಾದಿಗಳ ಆಶಯದಂತೆ ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ದೇವಸ್ಥಾನದ ಶಂಕುಸ್ಥಾಪನೆ ದಿನಾಂಕ : 16-05-2010 ರ ಭಾನುವಾರ ಬೆಳಿಗ್ಗೆ 9-30 ರ ಕರ್ಕಾಟಕ ಲಗ್ನದಲ್ಲಿ ಭೂಮಿ ಪೂಜೆಯನ್ನು ನೆರವೇರಿಸಲಾಯಿತು. ಆ ದಿನದ ಭೂಮಿಪೂಜೆ ಕಾರ್ಯಕ್ರಮಕ್ಕೆ ಶ್ರೀ ಆದಿಚುಂಚನಗಿರಿ ಶಾಖಾಮಠದ ಪೂಜ್ಯ ಶ್ರೀಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಭೂಮಿ ಪೂಜೆಯನ್ನು ನೆರೆವೇರಿಸಲಾಯಿತು. ಅನ್ನಪೂರ್ಣೇಶ್ವರೀ ಸೇವಾ ಸಮಿತಿ ಅಧ್ಯಕ್ಷರಾದಂತಹ ಶ್ರೀ ಹನುಮಾನ್‍ಸಿಂಗ್ ರವರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಬಾಗವಹಿಸಿದ್ದರು. ಸಮಸ್ತ ಬೊಮ್ಮನಕಟ್ಟೆ ಭಕ್ತಾದಿಗಳು ಬಾಗವಹಿಸಿದ್ದರು.

Mobirise

ಉದಯವಾಯಿತು ದಿವ್ಯಜ್ಯೋತಿ

ಸ್ವಸ್ತಿಶ್ರೀ ಶಾಲಿವಾಹನ ಶಕೆ 1935 ನಂದನ ನಾಮ ಸಂವತ್ಸರದ ಜೇಷ್ಠ ಶುದ್ದ 2 ರ ದಿನಾಂಕ : 23-05-2012ರ ಬುಧವಾರ ಮತ್ತು 24-05-2012ರ ಗುರುವಾರದಂದು ಅಮ್ಮನವರ ಪ್ರತಿಷ್ಠಾಪನೆಯಾಯಿತು. ಆ ದಿನದ ಅಧ್ಯಕ್ಷರಾದಂತಹ ಶ್ರೀ ಬಿ.ಕೆ. ಬೆನಕಪ್ಪನವರ, ಉಪಾಧ್ಯಕ್ಷರಾದ ಶ್ರೀ ಎನ್.ಹೆಚ್, ಪ್ರಭಾಕರ್ರ0ವರ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು. ಶಿವಮೊಗ್ಗ ನಗರದ ಜನತೆಗೆ ಬಹುದಿನದ ಕನಸು ಈಡೇರಿತು. ಆ ದಿವಸ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ದಿವ್ಯ ಸಾನ್ನಿಧ್ಯ ವಹಿಸಿದಂತಹ ಪೂಜ್ಯ ಸ್ವಾಮೀಜಿಗಳವರಾದ ಪೂಜ್ಯ ಶ್ರೀಶ್ರೀ ಸಚ್ಚಿದಾನಂದ ವಾಲುಕೇಶ್ವರ ಭಾರತೀ ಮಹಾಸ್ವಾಮಿಗಳು ಶ್ರೀ ಶೃಂಗೇರಿ ಮಹಾ ಸಂಸ್ಥಾನ, ಕೂಡಲಿ. ಹಾಗೂ ಪೂಜ್ಯ ಶ್ರೀಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಬೆಕ್ಕಿನಕಲ್ಮಠ, ಶಿವಮೊಗ್ಗ. ಪೂಜ್ಯ ಶ್ರೀಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳು, ಶ್ರೀ ಅದಿಚುಂಚನಗಿರಿ ಕ್ಷೇತ್ರ, ಪೂಜ್ಯ ಶ್ರೀಶ್ರೀ ಚಂದ್ರಶೇಖರನಾಥ ಸ್ವಾಮೀಜಿಯವರು, ಶ್ರೀ ಆದಿಚುಂಚನಗಿರಿ ಶಾಖಾ ಮಠ, ದಸರಿಘಟ್ಟ, ತಿಪಟೂರು. ಪೂಜ್ಯ ಶ್ರೀ ದತ್ತಾವದೂತ ಮಹಾರಾಜರು, ಶ್ರೀ ಕ್ಷೇತ್ರ ಹೆಬ್ಬಳ್ಳಿ ಹಾಗೂ ಪೂಜಾ ಮಾರ್ಗದರ್ಶನದ ವೇದ ಬ್ರಹ್ಮ ಶ್ರೀ ಹಂದಲಸು ಲಕ್ಷ್ಮಿನಾರಾಯಣ ಭಟ್ಟರು, ತ್ರಿವೇದಿಗಳು, ಶಿವಮೊಗ್ಗ. ಪೂಜ್ಯರುಗಳ ದಿವ್ಯ ಸನ್ನಿಧಾನದಲ್ಲಿ ಹಾಗೂ ಗಣ್ಯಾತಿಗಣ್ಯರು, ಸಮಸ್ತ ಭಕ್ತಾಧಿಗಳ ಸಮ್ಮುಖದಲ್ಲಿ ಲೋಕಾರ್ಪಣೆಯಾಯಿತು.

Mobirise

ಬೆಳಗಿತು ದಿವ್ಯಜ್ಯೋತಿ

2021ನೇ ಮೇ ತಿಂಗಳ ದಿನಾಂಕ : 23 ಮತ್ತು 24 ಕ್ಕೆ ದೇವಸ್ಥಾನಕ್ಕೆ 10 ವರ್ಷ ತುಂಬುತ್ತದೆ. ಈ ಪ್ರಯುಕ್ತ ಶ್ರೀ ಅನ್ನಪೂರ್ಣೇಶ್ವರೀ ಆಡಳಿತ ಮಂಡಳಿ ವತಿಯಿಂದ ದಶಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಶ್ರೀ ಅನ್ನಪೂರ್ಣೇಶ್ವರೀ ಸೇವಾ ಸಮಿತಿಯ ಅಧ್ಯಕ್ಷರಾದಂತಹ ಶ್ರೀ ಜಿ.ಕೆ. ಮಾಧವಮೂರ್ತಿಯವರ ಅಧ್ಯಕ್ಷತೆಯಲ್ಲಿ ದಶಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ದೇವಸ್ಥಾನದ ಹಿಂಬಾಗದಲ್ಲಿ ಮಹಾಗಣಪತಿ ದೇವಸ್ಥಾನ ಹಾಗೂ ಗಂಗಾಧರೇಶ್ವರ ದೇವಸ್ಥಾನ ಹಾಗೂ ಬಡವರ ಅನುಕೂಲಕ್ಕಾಗಿ ಒಂದು ಸಮುದಾಯ ಭವನ ನಿರ್ಮಾಣವಾಗಿದೆ. ಭಕ್ತಾದಿಗಳು ತುಂಬುಹೃದಯದಿಂದ ಈ ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮ ಭಕ್ತಿ ಸಮರ್ಪಣೆ ಮಾಡಿದ್ದಾರೆ.

ಶ್ರೀ ಕ್ಷೇತ್ರದ ಪರಿವಾರ ದೇವಸ್ಥಾನಗಳು



ಶ್ರೀ ನಾಗರ ದೇವಸ್ಥಾನ

ಶ್ರೀ ಮಹಾಗಣಪತಿ ದೇವಸ್ಥಾನ

ಶ್ರೀ ಗಂಗಾಧರೇಶ್ವರ ದೇವಸ್ಥಾನ



ಶ್ರೀ ನವಗ್ರಹ ದೇವಸ್ಥಾನ

ಭಕ್ತಾದಿಗಳ ಗಮನಕ್ಕೆ

Name: Sri Annapurneshwari Seva Samithi (R)
A.c No: 74480100002836
IFSC Code: BARB0VJSHLB (Fifth Letter is Zero)
Bank: Bank of Baroda, Navule, SHIMOGA

ಶ್ರೀ ಓಂಕಾರ ಮೂರ್ತಿ -     +91 76760 30660

+91 98802 29270, +91 94487 44869, +91 98451 11926

ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ಸಭಾ ಭವನ
ಸೇವೆಗೆ ಲಭ್ಯವಿರುತ್ತದೆ.

ಶ್ರೀ ಅನ್ನಪೂರ್ಣೇಶ್ವರೀ ಸೇವಾ ಸಮಿತಿ (ರಿ.) ಆಡಳಿತ ಮಂಡಳಿ.

ಸಂಪರ್ಕಿಸಿ.

ವಿಳಾಸ:

ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ದೇವಸ್ಥಾನ,
ಬೊಮ್ಮನಕಟ್ಟೆ, ಶಿವಮೊಗ್ಗ.

ಮೊಬೈಲ್:

+91 98451 11926
+91 98802 29270
+91 94487 44869
+91 76760 30660

ಇಮೇಲ್:

[email protected]

FOLLOW US!

© Copyright 2024 Sri Annapurneshwari Temple, Bommanakatte, Shimoga - All Rights Reserved